ಸಿವಿಕ್ ಬೆಂಗಳೂರು – ಒಂದು ಪರಿಚಯ
ಸಿವಿಕ್ ಸ್ಥಾಪನೆಗೊಂಡಿದ್ದು 1992ರಲ್ಲಿ. ಪ್ರಾರಂಭದಲ್ಲಿ ಇದರ ಸ್ಥಾಪನೆಗಾಗಿ ಜೊತೆಗೂಡಿದವರು ಹಲವಾರು ಹಿನ್ನೆಲೆ ಹೊಂದಿದ್ದ ವ್ಯಕ್ತಿಗಳು, ವ್ಯಾಪಾರಿಗಳು, ಸಮಾಜ ಮತ್ತು ಆಥರ್ಿಕ ಅಭಿವೃದ್ದಿ ವಿಜ್ಞಾನಿಗಳು, ಚಿಂತನಶೀಲರು ಮತ್ತು ನಾಗರೀಕರ. ಬೆಂಗಳೂರಿನ ಅಭಿವೃದ್ಧಿ ಏಕೆ ದಾರಿ ತಪ್ಪುತ್ತಿದೆ? ಅದನ್ನು ಸರಿದಾರಿಗೆ ತರಲು ಏನು ಮಾಡಬೇಕು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದ ಈ ವಿವಿಧ ಹಿನ್ನೆಲೆಯ ವ್ಯಕ್ತಿಗಳು, ಕ್ರಮವಾಗಿ ಸಭೆ ಸೇರಿ, ಚೆಚರ್ಿಸಿ, ಮುಂದಡಿಯಿಟ್ಟ ಫಲವಾಗಿ ಮೂಡಿದ್ದು ಸಿವಿಕ್.
ನಗರದ ಯೋಜನೆ ಮತ್ತು ನಿರ್ವಹಣೆಗಳು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ಹೇಗೆ ನಡೆಯಬೇಕೆಂಬ ವಿಚಾರಕ್ಕೆ ಸಿವಿಕ್ ಪ್ರಯತ್ನ ನಡೆಸುತ್ತ ಬಂದಿದೆ. ಈ ವೇದಿಕೆಯಲ್ಲಿ ನಾಗರೀಕರ ಉಪತಂಡವಿದ್ದು ಅವರೆಲ್ಲರೂ ಆಯಾ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಧ್ಯೇಯನಿಷ್ಠರಾಗಿದ್ದಾರೆ. ವೇದಿಕೆಯು ವಿವಿಧ ವಲಯ ಹಾಗೂ ಸಂಘಟನೆಗಳನ್ನು ಒಂದುಗೂಡಿಸಿ ನಗರಾಡಳಿತದಲ್ಲಿ ಅಪೇಕ್ಷಿತ ಬದಲಾವಣೆ ತರಲು ಪ್ರಯತ್ನಿಸುತ್ತಿದೆ.
ಈ ನಿಟ್ಟಿನಲ್ಲಿ ಸಿವಿಕ್ ಸಂಸ್ಥೆಯು ಮಾಹಿತಿಹಕ್ಕು ಕಾಯ್ದೆ 2005ನ್ನು ಆಧರಿಸಿ ನಗರಾಡಳಿತದಲ್ಲಿ ಸುಧಾರಣೆ ತರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದಲ್ಲದೇ ನಗರಪಾಲಿಕೆ ಕಾಯ್ದೆ (74ನೇ ಸಂವಿಧಾನ ತಿದ್ದುಪಡಿ) ಮತ್ತು ಮಾಹಿತಿ ಹಕ್ಕು ಕಾಯ್ದೆಗಳನ್ನು ಉಪಯೋಗಿಸಿ ನಗರದ ಬಡವರ-ದುರ್ಬಲ ಮತ್ತು ದ್ವನಿ ಇಲ್ಲದ ವರ್ಗದವರು ಮತ್ತು ನಗರ ಬೆಳವಣಿಗೆಯ ಅಂಚಿನಲ್ಲಿರುವವರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸ್ಥಳೀಯ ಆಡಳಿತದಲ್ಲಿ ಜನರ ಸಹಭಾಗಿತ್ವದ ಮೂಲಕ ಅಭಿವೃದ್ಧಿ ಮತ್ತು ಸಮಾನತೆಯನ್ನು ತರುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ.
ಪ್ರಸ್ತುತ ಸೇವೆಗಳನ್ನು ಪಡೆಯುವಲ್ಲಿ ನಗರ ಬಡವರು ಹಿಂದೆ ಉಳಿದಿದ್ದು, ಸೇವೆಗಳು ಮತ್ತು ಹಕ್ಕನ್ನು ಪಡೆಯಲು ಯಾವುದೇ ಮಾದರಿಗಳು ಇಲ್ಲದಾಗಿದೆ. ಇಲಾಖೆಯಲ್ಲಿನ ಯೋಜನೆಗಳು, ಬಡವರಿಗೆಂದೆ ರೂಪಿಸಲಾದ ಕಾರ್ಯಕ್ರಮಗಳ ಮಾಹಿತಿ ಇಲ್ಲದೆ ಹಣದ ಪೋಲಾಗುತ್ತಿದೆ ಮತ್ತು ಕೆಲವು ಸೌಲಭ್ಯಗಳನ್ನು ಪಡೆಯಲು ತಮ್ಮ ದಿನದ ದುಡಿಮೆಯ ಬಹುಪಾಲು ಹಣವನ್ನು ವ್ಯಯಿಸುತ್ತಿದ್ದಾರೆ. ಇಲಾಖೆಯಲ್ಲಿನ ನೀತಿ ನಿಯಮಗಳ ಅಡಿಯಲ್ಲಿ ತಮ್ಮ ಪಾಲನ್ನು ಪಡೆಯುವಲ್ಲಿ ಸೋಲುತ್ತಿರುವುದು ಪ್ರಸ್ತುತ ಪರಿಸ್ತಿತಿ.
ಹಾಗಾಗಿ ಸಿವಿಕ್ ಸಂಸ್ಥೆಯು ಇಲಾಖೆಯ ನೀತಿ ನಿಯಮಗಳನ್ವಯ ಬಡವರು ಸೌಲಭಗಳನ್ನು ಪಡೆಯುವುದು ಹೇಗೆ ಮತ್ತು ಸಾದ್ಯವೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕಲು ಹೊರಟಿದೆ. ಮತ್ತು ಬಡವರಿಗೆಂದೆ ಮೀಸಲಿಟ್ಟ ಹಣದಲ್ಲಿ ಬಹುಪಾಲು ಬಡವರಿಗೆ ತಲುಪುವಂತೆ ಮಾಡುವುದೆ ಈ ಯೊಜನೆಯ ಉದ್ದೇಶವಾಗಿದೆ.
ಪ್ರಸ್ಥುತ ಈ ಜಾಲದಲ್ಲಿ ಪಡಿತರ ವ್ಯವಸ್ಥೆಯ ಕುರಿತಾದ ಸಿವಿಕ್ ಸಂಸ್ಥೆಯ ಕೆಲಸ ಕಾರ್ಯಗಳು ಮತ್ತು ಇತರ ಅವಶ್ಯಕ ಮಾಹಿತಿಯನ್ನು ಹಂಚಿಕೊಳ್ಳಲು ಈ ಜಾಲವನ್ನು ರೂಪಿಸುತ್ತಿದೆ. ಈ ಕುರಿತಾಗಿ ಎಲ್ಲಾ ಒದುಗರ ಮತ್ತು ಈ ಕುರಿತಾದ ಕಾಳಜಿ ಉಳ್ಳವರ ಎಲ್ಲಾ ಸಲಹೆಗಳಿಗೆ ಸ್ವಾಗತವಿರುತ್ತದೆ.