ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ, ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ
ಸಾರ್ವಜನಿಕ ವಿತರಣೆ ವ್ಯವಸ್ಥೆಯ ಕುರಿತು ತಿಳುವಳಿಕಾ ಕಾರ್ಯಗಾರದಲ್ಲಿ ಸಾರ್ವಜನಿಕರಿಂದ ಹೊಸ ಪಡಿತರ ಚೀಟಿಯ ಬಗ್ಗೆ ಕಂಡು ಬಂದ ಸಮಸ್ಯೆಗಳು.
ಹೊಸ ಪಡಿತರ ಚೀಟಿಯನ್ನು ಪಡೆಯಲು ನಾವು ಅಂರ್ತಜಾಲದಲ್ಲಿ 4 ತಿಂಗಳ ಹಿಂದೆಯೇ ಇಲಾಖೆಗೆ ಅಜರ್ಿಸಲ್ಲಿಸಲಾಗಿತ್ತು ಆದರೆ ಇದುವರೆವಿಗೂ ನಮ್ಮ ಮೊಬೈಲ್ಗೆ ಸಂದೇಶ ಬಂದಿಲ್ಲ ಎಂದು ಕಾರ್ಯಕ್ರಮಕ್ಕೆ ಬಂದಿದ್ದ ಸಾರ್ವಜನಿಕರು ತಿಳಿಸಿದರು.
ಆಹಾರ ಇಲಾಖೆಯಿಂದ ಸಂದೇಶ ಬಂದಿದ್ದು ನಮಗೆ ಅದನ್ನು ಏನು ಮಾಡಬೇಕು ಎಂಬುದು ತಿಳಿದಿಲ್ಲ.
ಆಹಾರ ಇಲಾಖೆಯಿಂದ ಸಂದೇಶ ಬಂದಿತ್ತು ಆದರೆ ನಮಗೆ ಈ ಕುರಿತು ತಿಳುವಳಿಕೆ ಇಲ್ಲದೆ, ಆ ಸಂದೇಶ ಹಾಳಾಗಿದೆ.
ಅಜರ್ಿ ಸಲ್ಲಿಸುವಾಗ ಕೊಟ್ಟ ಮೊಬೈಲ್ ಸಂಖ್ಯೆ ಬದಲಾವಣೆಯಾಗಿದೆ ಮತ್ತು ಕೆಲವು ಸಾರ್ವಜನಿಕರ ಮೊಬೈಲ್ ಈಗ ಕಳೆದು ಹೋಗಿದೆ.
ಅಂರ್ತಜಾಲದಲ್ಲಿ ಅಜರ್ಿ ಸಲ್ಲಿಸುವಾಗ ನಮ್ಮ ವ್ಯಾಪ್ತಿಗೆ ಬರುವ ಆಹಾರ ಇಲಾಖೆ ಗೊತ್ತಿಲ್ಲದೆ, ಬೇರೆ ವ್ಯಾಪ್ತಿಗೆ ದಾಖಲಾಗಿದೆ.
ನಾವು ತುಂಬಾ ಬಡವರಾಗಿದ್ದು, ಎಪಿಎಲ್ ಕಾಡರ್್ ಬಡವರ ಕಾಡರ್್ ಎಂದು ತಿಳಿದು ಅದಕ್ಕೆ ಅಜರ್ಿಸಲ್ಲಿಸಿದ್ದೇವೆ.
ಆಹಾರ ಇಲಾಖೆಯು ನಿಗದಿಪಡಿಸಿರುವ ಬಯೋ ಸೇವಾಕೇಂದ್ರದ ವಿಳಾಸದ ಬಗ್ಗೆ ನಮಗೆ ಮಾಹಿತಿ ಇಲ್ಲ.
ನಮ್ಮ ವ್ಯಾಪ್ತಿಗೆ ಬರುವ ಆಹಾರ ಇಲಾಖೆಯ ವಿಳಾಸ ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ಬಗ್ಗೆ ಮಾಹಿತಿ ಇಲ್ಲ.
ಆಹಾರ ಇಲಾಖೆಯು ನವೆಂಬರ್ 2011 ರಿಂದ ಅಂತಜರ್ಾಲದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆಯಲು ಅಜರ್ಿಯನ್ನು ಆಹ್ವಾನಿಸಲಾಯಿತು. ಅದೇತರಹ ನಾಗವಾರ ವಾಡರ್್, ಲಿಂಗರಾಜಪುರಂ ವಾಡರ್್ನ ಸಾರ್ವಜನಿಕರು ಅಂತಜರ್ಾಲದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆಯಲು ಅಜರ್ಿಯನ್ನು ಸಲ್ಲಿಸಿದ್ದರು. ಇದನ್ನು ಮನಗಂಡ ಸಿವಿಕ್ ಸಂಸ್ಥೆಯು ಕಾರ್ಯ ನಿರ್ವಹಿಸುವ ನಾಗವಾರ ಮತ್ತು ಲಿಂಗರಾಜಪುರದಲ್ಲಿ ಅಂತಜರ್ಾಲದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆಯಲು ಅಜರ್ಿ ಸಲ್ಲಿಸಿ ಸ್ವೀಕೃತಿ ಪಡೆದು ಸಮಸ್ಯೆ ಹೊಂದಿದವರನ್ನು ಸಂಬಂಧಪಟ್ಟ ಆಹಾರ ಇಲಾಖೆಗೆ ಕರೆದು ಕೊಂಡು ಹೋಗಿ ಮೇಲ್ಕಂಡ ಎಲ್ಲಾ ಸಮಸ್ಯೆಗಳಿಗೆ ಇಲಾಖೆ ಅಧಿಕಾರಿಗಳಿಂದ ಪರಿಹಾರ ಸೂಚಿಸಲಾಯಿತು.
ಸಿವಿಕ್ ಸಂಸ್ಥೆಯು ಸಾರ್ವಜನಿಕ ವಿತರಣೆ ವ್ಯವಸ್ಥೆಯ ಬಗ್ಗೆ ತಿಳುವಳಿಕಾ ಕಾರ್ಯಗಾರದಿಂದ ನಾಗವಾರದಲ್ಲಿ 80 ಕುಟುಂಬದವರು ಮತ್ತು ಲಿಂಗರಾಜಪುರನಲ್ಲಿ 30 ಕುಟುಂಬದವರು ಹೊಸ ಪಡಿತರ ಚೀಟಿ ಪಡೆಯಲು ಸಾಧ್ಯವಾಯಿತು. ಹಾಗೂ ನಾಗವಾರ ವಾಡರ್್ನ ಝಫ್ರುಲ್ಲಾ ಲೇಔಟ್ ಕೊಳಚೆ ಪ್ರದೇಶದಲ್ಲಿನ ಸಾರ್ವಜನಿಕರು ಆನೇಕ ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅಜರ್ಿ ಸಲ್ಲಿಸುತ್ತಿದರು ಅವರಲ್ಲಿ ಅನೇಕರಿಗೆ ಪಡಿತರ ಚೀಟಿ ದೊರೆತಿರಲ್ಲಿಲ್ಲ, ಈ ಕಾರಣಕ್ಕಾಗಿ ಅನೇಕರು ಅಜರ್ಿಹಾಕುವುದನೇ ನಿಲ್ಲಿಸಿದರು. ಸಿವಿಕ್ ಸಂಸ್ಥೆ ಮಾಡಿದ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಬಗ್ಗೆ ತಿಳುವಳಿಕಾ ಕಾರ್ಯಗಾರದ ಕಾರ್ಯಕ್ರಮದಿಂದ ಅಲ್ಲಿನ ಸ್ಥಳೀಯರು ಸಿವಿಕ್ ಸಂಸ್ಥೆಯ ಸಹಯೋಗದೊಂದಿಗೆ 40 ಜನರು ಆಹಾರ ಇಲಾಖೆಯ ಅಂರ್ತಜಾಲದ ಮೂಲಕ ಅಜರ್ಿಸಲ್ಲಿಸಿ ಈಗ ಅವರ ಭಾವಚಿತ್ರ ತೆಗೆಯುವ ಪ್ರಕ್ರಿಯೆ ಬಯೋ ಸೇವಾ ಕೇಂದ್ರದಲ್ಲಿ ಪೂರ್ಣಗೊಂಡಿದೆ.
ಸಾರ್ವಜನಿಕರಲ್ಲಿ ಆಹಾರ ಇಲಾಖೆಯ ಬಗ್ಗೆ ಮಾಹಿತಿ ಕೊರತೆಯನ್ನು ಹೋಗಲಾಡಿಸಲು ಕೆಲವು ಸಲಹೆಗಳು:
ಆಹಾರ ಇಲಾಖೆಯು ಸಾರ್ವಜನಿಕರಿಗೆ ಹೊಸ ಪಡಿತರ ಚೀಟಿ ಪಡೆಯಲು ಸಾಕಷ್ಟು ಮಾಹಿತಿಯನ್ನು ನೀಡುವುದು.
ಸಾರ್ವಜನಿಕ ಸ್ಥಳಗಳಲ್ಲಿ ಸಭೆಗಳನ್ನು ಮಾಡಿ ಇಲಾಖೆ ನೀಡುತ್ತಿರುವ ಸೇವೆಗಳ ಬಗ್ಗೆ ಜನರ ಅಹವಾಲು ಪಡೆದು ಪರಿಹರಿಸುವುದು.
ಸಾರ್ವಜನಿಕ ವಿತರಣೆ ವ್ಯವಸ್ಥೆಯ ಬಗ್ಗೆ ತಿಳುವಳಿಕಾ ಕಾರ್ಯಕ್ರಮಗಳನ್ನು ಮಾಡುವುದು.
ಇದೇ ರೀತಿಯಾಗಿ ಆಹಾರ ಇಲಾಖೆಯು ಬೇರೆ ವಾಡರ್್ಗಳಲ್ಲಿ ಸಾರ್ವಜನಿಕರು ಹೊಸ ಪಡಿತರ ಚೀಟಿ ಪಡೆಯಲು ಸಮಸ್ಯೆ ಪಡುತ್ತಿರುವುದನ್ನು ಗಮನಿಸಿ ಅವರಿಗೆ ಮಾಹಿತಿ ನೀಡಿದರೆ ಎಲ್ಲಾ ಕುಟುಂಬದವರು ಪಡಿತರ ಚೀಟಿ ಹೊಂದಲು ಸಹಕಾರವಾಗುತ್ತದೆ.
ಹೊಸ ಪಡಿತರ ಚೀಟಿಗೆ ಸಂಬಂಧಿಸಿದಂತೆ
ನಾಗವಾರ ವಾಡರ್್ನ ಬಯೋಮೆಟ್ರಿಕ್ ಸೇವಾಕೇಂದ್ರದಲ್ಲಿ ಹೊಸ ಪಡಿತರ ಚೀಟಿಗೆ ಮತ್ತು ಹಳೆ ಪಡಿತರ ಚೀಟಿಗೆ ಭಾವಚಿತ್ರ ತೆಗೆಸಿಕೊಳ್ಳಲು ಬಯೋಮೆಟ್ರಿಕ್ ಸೇವಾಕೇಂದ್ರಕ್ಕೆ ಹೋದಾಗ ಅಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಆಹಾರ ಇಲಾಖೆಯು ನಿಗದಿಪಡಿಸಿರುವ ಆದಾಯ ಪ್ರಮಾಣ ಪತ್ರವನ್ನು ರೂ. ಆರುನೂರುಗಳನ್ನು ಕೊಟ್ಟು ನಮ್ಮಲ್ಲಿಯೇ ಮಾಡಿಸಿಕೊಳ್ಳಿ, ಇಲ್ಲವಾದರೇ ಭಾವಚಿತ್ರ ತೆಗೆಯುವುದಿಲ್ಲ ಎಂದು ಹೇಳುತ್ತಾರೆ ಮತ್ತು ತಾಲೂಕು ಕಛೇರಿ ಹಾಗೂ ನೆಮ್ಮದಿ ಕೇಂದ್ರದಿಂದ ತಂದಂತಹ ಆದಾಯ ಪ್ರಮಾಣ ಪತ್ರವನ್ನು ನೀಡಿದರೆ, ಈಗ ಬೇರೆಯವರ ಭಾವಚಿತ್ರ ತೆಗೆಯಬೇಕು ನೀವು ಇನ್ನೊಮ್ಮೆ ಬನ್ನಿ ಎಂದು ಪ್ರತಿ ದಿನ ಅಲೆದಾಡಿಸುತ್ತಾರೆ. ಇಲ್ಲವಾದರೆ, ಭಾವಚಿತ್ರ ತೆಗೆಸುವಾಗ ಮನೆ ಕಾಗದ ಪತ್ರ, ವಿದ್ಯುತ್ ಬಿಲ್ ನೀಡಿದರೂ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾಡರ್್ಗಳನ್ನು ನೀಡಿ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ.
ಆದರೆ ಇಲಾಖೆಯು ಸೂಚಿಸಿರುವಂತೆ ಮನೆ ಕಾಗದ ಪತ್ರ ಅಥವಾ ಆಧಾರ್ ಕಾಡರ್್ ಅಥವಾ ಚುನಾವಣಾ ಗುರುತಿನ ಚೀಟಿ ಇವುಗಳಲ್ಲಿ ಯಾವುದಾದರೂ ಒಂದನ್ನು ನೀಡುವುದು ಮತ್ತು ತಾಲೂಕು ಕಛೇರಿಯಿಂದ ಪಡೆದ ಆದಾಯ ಪ್ರಮಾಣ ಪತ್ರವನ್ನು ನೀಡಿ ಸೇವಾಕೇಂದ್ರದಲ್ಲಿ ಕುಟುಂಬದ ಎಲ್ಲಾ ಸದಸ್ಯರು ಭಾವಚಿತ್ರವನ್ನು ತೆಗೆಸಬೇಕು.
ಭಾವಚಿತ್ರ ತೆಗೆದ ನಂತರ ಸ್ವಯಂ ಘೋಷಣೆ ಪತ್ರವನ್ನು 10ರೂ ಕೊಟ್ಟು ಇಲ್ಲೇ ತೆಗೆದುಕೊಳ್ಳಬೇಕು ಎಂದು ಹೇಳತ್ತಾರೆ.
ಆದರೆ ಇಲಾಖೆಯು ಸೂಚಿಸಿರುವಂತೆ ಈ ಸ್ವಯಂ ಘೋಷಣೆ ಪತ್ರವನ್ನು ಸೇವಾಕೇಂದ್ರದಲ್ಲೇ ಪಡೆಯಬೇಕಗಿಲ್ಲ. ಮೂಲ ಪ್ರತಿಯ ನಕಲು ಪ್ರತಿ ಮಾಡಿಸಿದರೆ 1.00ರೂಗಳಾಗುತ್ತದೆ.
ನಾಗವಾರ ಬಯೋಮೆಟ್ರಿಕ್ ಸೇವಾಕೇಂದ್ರದಲ್ಲಿ ಈ ಎಲ್ಲಾ ಸಮಸ್ಯೆಗಳನ್ನು ಗಮನಿಸಿದ ಸ್ಥಳೀಯರು ಸಿವಿಕ್ ಬೆಂಗಳೂರು ಸಂಸ್ಥೆಗೆ ಮತ್ತು ನಾಗವಾರ ಸ್ಥಳೀಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ತಿಳಿಸಿದರು.
ಈ ಸಮಸ್ಯೆಯನ್ನು ಮನಗಂಡ ಸಿವಿಕ್ ಸಂಸ್ಥೆಯು ಈ ವ್ಯಾಪ್ತಿಗೆ ಸಂಬಂಧಿಸಿದ ಆಹಾರ ಇಲಾಖೆಗೆ ಬಯೋಮೆಟ್ರಿಕ್ ಸೇವಾಕೇಂದ್ರದಲ್ಲಿ ್ಲ- ಕೇಂದ್ರದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ಹೆಸರು, ಅವರ ಕಾರ್ಯ ಮತ್ತು ಕರ್ತವ್ಯಗಳು, ಕಾರ್ಯ ನಿರ್ವಹಿಸುವ ಸಮಯ, ಆ ವ್ಯಾಪ್ತಿಯ ಆಹಾರ ನೀರಿಕ್ಷಕರ ಹೆಸರು, ದೂರವಾಣಿ ಸಂಖ್ಯೆ, ಹೊಸ ಪಡಿತರ ಚೀಟಿ ಪಡೆಯಲು ಮತ್ತು ಈಗಾಗಲೇ ಪಡಿತರ ಚೀಟಿ ಹೊಂದಿರುವವರು ನೀಡಬೇಕಾದ ಅಗತ್ಯ ದಾಖಲೆಗಳ ಪಟ್ಟಿಯನ್ನು ಕೇಂದ್ರದಲ್ಲಿ ಪ್ರಕಟಿಸುವ ಬಗ್ಗೆ ಲಿಖಿತವಾಗಿ ದೂರು ಸಲ್ಲಿಸಲಾಯಿತು.
ಇದಕ್ಕೆ ಪ್ರತಿಯಾಗಿ ಆಹಾರ ನಿರೀಕ್ಷಕರು ತಕ್ಷಣ ಕ್ರಮಕೈಗೊಂಡು ಸೇವಾ ಕೇಂದ್ರದಲ್ಲಿ ವಿಚಾರಣೆ ಮಾಡಿದಾಗ, ಬಯೋಮೆಟ್ರಿಕ್ ಸೇವಾಕೇಂದ್ರದ ಕಾರ್ಯನಿವರ್ಾಹಕನು ಈ ವಿಚಾರ ತಿಳಿದ ಕೂಡಲೇ ಸೇವಾಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಕೆಲಸದಿಂದ ತೆಗೆದಿರುವುದಾಗಿ ತಿಳಿಸಿದರು. ಆದಾಯ ಪ್ರಮಾಣ ಪತ್ರದ ಕುರಿತು ದಲ್ಲಾಳಿಗಳು ಸೇವಾಕೇಂದ್ರದಲ್ಲಿ ಅಜರ್ಿದಾರರಿಗೆ ಕೇಳುತ್ತಿದ್ದರು ಆಗ ಸೇವಾಕೇಂದ್ರ ಕಾರ್ಯನಿವರ್ಾಕರು ದಲ್ಲಾಳಿಗಳಿಗೆ ಪೋಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದಾಗ, ದಲ್ಲಾಳಿಗಳು ಅಲ್ಲಿಂದ ಪರಾರಿಯಾದರು. ಆಹಾರ ನಿರೀಕ್ಷಕರು ಇನ್ನು ಮುಂದೆ ಈ ರೀತಿಯಾಗದಂತೆ ಬಯೋ ಸೇವಾ ಕೇಂದ್ರದ ಕಾರ್ಯನಿವರ್ಾಹಕರಿಗೆ ಎಚ್ಚರಿಕೆ ನೀಡಿದ್ದಾರೆ.
ಈಗ ಇಲ್ಲಿನ ಸ್ಥಳೀಯ ನಾಗರೀಕರು ಸೇವಾ ಕೇಂದ್ರದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗುತ್ತಿಲ್ಲ ಎಂದು ತಿಳಿಸಿದರು.
ಆಹಾರ ಇಲಾಖೆಗೆ ಬಯೋಮೆಟ್ರಿಕ್ ಸೇವಾಕೇಂದ್ರದಲ್ಲ್ಲಿ- ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ಹೆಸರು, ಅವರ ಕಾರ್ಯ ಮತ್ತು ಕರ್ತವ್ಯಗಳು, ಕಾರ್ಯ ನಿರ್ವಹಿಸುವ ಸಮಯ, ಆ ವ್ಯಾಪ್ತಿಯ ಆಹಾರ ನೀರಿಕ್ಷಕರ ಹೆಸರು, ದೂರವಾಣಿ ಸಂಖ್ಯೆ, ಹೊಸ ಪಡಿತರ ಚೀಟಿ ಪಡೆಯಲು ಮತ್ತು ಈಗಾಗಲೇ ಪಡಿತರ ಚೀಟಿ ಹೊಂದಿರುವವರು ನೀಡಬೇಕಾದ ಅಗತ್ಯ ದಾಖಲೆಗಳ ಪಟ್ಟಿಯನ್ನು ಕೇಂದ್ರದಲ್ಲಿ ಪ್ರಕಟಿಸಿದರೆ, ಬಯೋ ಸೇವ ಕೇಂದ್ರದಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸಾರ್ವಜನಿಕರಿಗೆ ಸಂಕ್ಷಿಪ್ತವಾದ ಮಾಹಿತಿ ದೊರೆಯುತ್ತದೆ.