ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಸೌಲಭ್ಯವನ್ನು ಪಡೆದ ದೇಶಿಯಾನಗರ ಪ್ರದೇಶದ ಸಮುದಾಯದ ಜನರು
ಹಿನ್ನಲೆ:
ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯನ್ನು ಕೇಂದ್ರ ಸರ್ಕಾರ ನಗರಗಳಲ್ಲಿನ ಬಡಜನವನ್ನು ನಿವಾರಿಸುವ ಗುರಿಯನ್ನಿಟ್ಟುಕೊಂಡು 1997ರಲ್ಲಿ ಜಾರಿಗೆ ತಂದಿದೆ. 1997ರಲ್ಲಿ ಈ ಯೋಜನೆ ಬಂದಿದ್ದರೂ 2009 ರವರೆಗೂ ಅದರ ಹೆಸರೇ ಕೇಳದ, ಅದರ ಕಿಂಚಿತ್ತು ಮಾಹಿತಿಯೂ ಗೊತ್ತಿಲ್ಲದ ದೇಶಿಯಾನಗರ ಪ್ರದೇಶದ ಬಡ ನಿವಾಸಿಗಳು 2009ರ ನಂತರ ಅದರ ಮಾಹಿತಿಯನ್ನು ಪಡೆದು ಈ ಯೋಜನೆಯ ಸೌಲಭ್ಯವನ್ನು ಪಡೆದಿದ್ದಾರೆ.
ಸಿವಿಕ್ ಬೆಂಗಳೂರು ಸಂಸ್ಥೆಯು ಈ ಪ್ರದೇಶದ ಎಲ್ಲಾ ಜನರಿಗೆ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯಲ್ಲಿ ಬಡಜನರಿಗಾಗಿಯೇ ಇರುವ ಹಲವಾರು ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿತ್ತು. ಉದಾ: ಸಾಲ ಮತ್ತು ಸಹಾಯಧನವನ್ನು ಪಡೆದು ಸ್ವ ಉದ್ದೋಗವನ್ನು ಮಾಡಿಕೊಳ್ಳುವ ಬಗ್ಗೆ, ಕೌಶಲ್ಯ ತರಬೇತಿಯನ್ನು ಪಡೆಯುವ ಬಗ್ಗೆ, ಸಮುದಾಯ ಅಭಿವೃದ್ಧಿಗಾಗಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡುವ ಬಗ್ಗೆ ಹಾಗೂ ಈ ಯೋಜನೆಯಡಿಯಲ್ಲಿ ಸಿಗುವ ಇತರ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿತ್ತು.
ಕುಂದುಕೊರತೆಗಳ ಅಹವಾಲು ಸಭೆಯ ಪರಿಣಾಮ:
ಸಿವಿಕ್ ಬೆಂಗಳೂರು ಸಂಸ್ಥೆಯು ದಿನಾಂಕ 27-07-11 ರಂದು ಪೂರ್ವವಲಯ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕಲ್ಯಾಣ ಇಲಾಖೆಯ(ಪೂರ್ವವಲಯ) ಸಂಯುಕ್ತಾಶ್ರದಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಕುಂದುಕೊರತೆಗಳ ಅಹವಾಲು ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶಿಯಾನಗರ ಪ್ರದೇಶದ ಜನರು ತಮ್ಮ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡಬೇಕಾಗಿ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ಬಗ್ಗೆ ಬರವಣಿಗೆಯ ಮೂಲಕ ದಿನಾಂಕ 20-09-11 ರಂದು ಪತ್ರವನ್ನು ಸಹ ಬರೆದಿದ್ದಾರೆ. ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ದಿನಾಂಕ-29-11-11ರಂದು ಈ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳ ಸೌಲಭ್ಯವನ್ನು ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಎಸ್.ಜೆ.ಎಸ್.ಆರ್.ವೈ ಯೋಜನೆಯ ಈ ಸೌಲಭ್ಯವನ್ನು ದೇಶಿಯಾನಗರದ
ಆಟಿಕೆ ಸಾಮಗ್ರಿಗಳ ವಿವರ :
ರಾಕಿಂಗ್ ಹಾರ್ಸ್(ಮರದ ಕುದುರೆ) -1
3 ಚಕ್ರದ ಸೈಕಲ್ -2
ವಿವಿಧ ರೀತಿಯ ಆಕೃತಿ(ಗೊಂಬೆಗಳು) -1 ಸೆಟ್
ಪ್ರಾಣಿಗಳ ಗೊಂಬೆಗಳು -1 ಸೆಟ್
ಕೌಂಟಿಗ್ ಫ್ರೇಮ್ -2 ಸೆಟ್
ಪ್ಲಾಸ್ಟಿಕ್ ಪ್ರಾಣಿಗಳು(ಗೊಂಬೆಗಳು)-1 ಸೆಟ್
ಹಕ್ಕಿಗಳ ಗೊಂಬೆಗಳು-1 ಸೆಟ್
ಚಿಕ್ಕ ಪ್ಲಾಸ್ಟಿಕ್ ಬಸ್-1 ಸೆಟ್
ಚಿಕ್ಕ ಟ್ರೈನ್ ಇಂಜಿನ್-1 ಸೆಟ್
ಬಾಲ್ಸ್-2
ಬಿಲ್ಡಿಂಗ್ ಬ್ಲಾಕ್ ಸೆಟ್ -1
ಮಣೆ(ಮರದ್ದು) – 4 ಎಲ್ಲಾ ಆಟಿಕೆ ಸಾಮಗ್ರಿಗಳನ್ನು ಒಳಗೊಂಡಿರುವ ಚಿತ್ರ
ದೇಶಿಯಾನಗರ ಸಮುದಾಯದ ಜನರು ತಮ್ಮ ಪ್ರದೇಶದ ಅಂಗನವಾಡಿ ಮಕ್ಕಳಿಗೆ ನೀಡಲು ಅಲ್ಲಿನ ಅಂಗನವಾಡಿ ಸಹಾಯಕಿಗೆ ಇಲಾಖೆಯಿಂದ ಬಂದಂತಹ ಆಟಿಕೆ ಸಾಮಗ್ರಿಗಳನ್ನು ನೀಡುತ್ತಿರುವ ಚಿತ್ರ.
ಇಲ್ಲಿನ ಮಕ್ಕಳು ಸೈಕಲ್ ಸವಾರಿ ಮಾಡುತ್ತಾ, ಕುದುರೆ ಸವಾರಿ ಮಾಡುತ್ತಾ ಸಂಭ್ರಮಿಸುತ್ತಿರುವ ಚಿತ್ರಗಳು
ಸಿವಿಕ್ ಬೆಂಗಳೂರು