ಬಯೋ ಸೇವಾ ಕೇಂದ್ರಕ್ಕೆ ಸಂಬಂಧಿಸಿದಂತೆ
ದಿನಾಂಕ: 09-08-2012
ಆಯುಕ್ತರು
ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಕನರ್ಾಟಕ ಸಕರ್ಾರ
ಮಾನ್ಯರೆ,
ವಿಷಯ: ಬಯೋಮೆಟ್ರಿಕ್ ಫೋಟೋ ಕೇಂದ್ರಗಳಲ್ಲಿ- ಕೇಂದ್ರದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ಹೆಸರು, ಅವರ ಕಾರ್ಯ ಮತ್ತು ಕರ್ತವ್ಯಗಳು, ಕಾರ್ಯ ನಿರ್ವಹಿಸುವ ಸಮಯ, ಆ ವ್ಯಾಪ್ತಿಯ ಆಹಾರ ನೀರಿಕ್ಷಕರ ಹೆಸರು, ದೂರವಾಣಿ ಸಂಖ್ಯೆ, ಹೊಸ ಪಡಿತರ ಚೀಟಿ ಪಡೆಯಲು ಮತ್ತು ಈಗಾಗಲೇ ಪಡಿತರ ಚೀಟಿ ಹೊಂದಿರುವವರು ನೀಡಬೇಕಾದ ಅಗತ್ಯ ದಾಖಲೆಗಳ ಪಟ್ಟಿಯನ್ನು ಕೇಂದ್ರದಲ್ಲಿ ಪ್ರಕಟಿಸುವ ಬಗ್ಗೆ.
ಸಿವಿಕ್ ಬೆಂಗಳೂರು ಸಂಸ್ಥೆಯು 1992ರಿಂದ ಉತ್ತಮ ನಗರಾಡಳಿತಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂವಿಧಾನದ 74ನೇ ತಿದ್ದುಪಡಿಯ ಉತ್ತಮ ಜಾರಿಗಾಗಿ ಪ್ರಯತ್ನಿಸುತ್ತಿದೆ. ಅದರೊಂದಿಗೆ 2008 ರಿಂದ ನಗರದ ಬಡಜನರಿಗೆ ನೀರು, ಆಹಾರ, ಶಿಕ್ಷಣ, ಆರೋಗ್ಯ, ಮತ್ತು ಜೀವಾನೋಪಾಯಗಳಂತಹ ಅತ್ಯಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಕರ್ಾರದೊಟ್ಟಿಗೆ ಕಾರ್ಯ ನಿರ್ವಹಿಸುತ್ತಿದೆ.
ಪಡಿತರ ಇಲಾಖೆಯು ನಕಲಿ ಕಾಡರ್್ಗಳನ್ನು ನಿವಾರಿಸುವ ಸಲುವಾಗಿ ಹೊಸದಾಗಿ ಎಲ್ಲರಿಗೂ ಪಡಿತರ ಚೀಟಿಯನ್ನು ವಿತರಿಸುತ್ತಿದ್ದು ಅದಕ್ಕಾಗಿ ಪಡಿತರ ಚೀಟಿಯ ಅಜರ್ಿದಾರರು ಕುಟುಂಬ ಸಮೇತ ಬಯೋಮೆಟ್ರಿಕ್ ಕೇಂದ್ರಗಳಲ್ಲಿ ತಮ್ಮ ಭಾವಚಿತ್ರಗಳನ್ನು ತೆಗೆಸಿಕೊಳ್ಳಬೇಕಿದೆ. ಹಾಗೆ ಭಾವಚಿತ್ರ ತೆಗೆಸಿಕೊಳ್ಳಲು ಹೋದಾಗ ಅಲ್ಲಿನ ಅಧಿಕಾರಿಗಳು 600 ರೂಪಾಯಿಗಳನ್ನು ಕೊಟ್ಟು ಆದಾಯ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಿ ಎಂದು ಕೇಳುತ್ತಾರೆ. ಅಲ್ಲದೇ, ನೆಮ್ಮದಿ ಕೇಂದ್ರ ಹಾಗೂ ತಾಲ್ಲೂಕು ಕಛೇರಿಯಿಂದ ಪಡೆದುಕೊಂಡಿರುವ ಆದಾಯ ಪ್ರಮಾಣ ಪತ್ರವನ್ನು ಅಲ್ಲಿ ನೀಡಿದರೆ ನಾಳೆ ಬನ್ನಿಯೆಂದು ಹೇಳಿ ಕಳುಹಿಸುತ್ತಾರೆ. ಇದರಿಂದ ಉದ್ದುದ್ದ ಸಾಲಿನಲ್ಲಿ ಗಂಟೆ ಗಟ್ಟಲೆ ನಿಂತು ಆದಾಯ ಪ್ರಮಾಣ ಪತ್ರ ಪಡೆದುಕೊಂಡವರು ಮತ್ತೆ ಮತ್ತೆ ಬಯೋಮೆಟ್ರಿಕ್ ಕೇಂದ್ರಗಳಿಗೆ ಅಲೆಯುವಂತಾಗಿದೆ.
ಇದನ್ನು ತಡೆಗಟ್ಟಲು ಎಲ್ಲ ಬಯೋಮೆಟ್ರಿಕ್ ಕೇಂದ್ರಗಳಲ್ಲಿ ಆ ಕೇಂದ್ರದ ಅಧಿಕಾರಿಯ ಹೆಸರು, ಅವರ ಕಾರ್ಯ ಮತ್ತು ಕರ್ತವ್ಯಗಳ ಪಟ್ಟಿ, ಕೇಂದ್ರವು ಕಾರ್ಯ ನಿರ್ವಹಿಸುವ ವೇಳಾ ಪಟ್ಟಿ, ಆ ಕೇಂದ್ರದ ವ್ಯಾಪ್ತಿಯ ಆಹಾರ ನಿರೀಕ್ಷಕರ ಹೆಸರು, ದೂರವಾಣಿ ಸಂಖ್ಯೆ, ಹೊಸದಾಗಿ ಪಡಿತರ ಚೀಟಿಗಾಗಿ ಅಜರ್ಿ ಹಾಕುವವರು ನೀಡಬೇಕಾದ ದಾಖಲೆಗಳ ಪಟ್ಟಿ, ಈಗಾಗಲೇ ಪಡಿತರ ಚೀಟಿಯಿರುವವರು ನೀಡಬೇಕಾದ ದಾಖಲೆಗಳ ಪಟ್ಟಿಯನ್ನು ವಿವರವಾಗಿ ಬರೆದ ಫಲಕವನ್ನು ಪ್ರತೀ ಬಯೋಮೆಟ್ರಿಕ್ ಕೇಂದ್ರಗಳಲ್ಲಿ ಪ್ರದಶರ್ಿಸಿ ಜನರನ್ನು ತೊಂದರೆಯಿಂದ ಪಾರು ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
ವಂದನೆಗಳೂಂದಿಗೆ
ಸಿವಿಕ್ ಬೆಂಗಳೂರು ಸಂಸ್ಥೆ ಇಂತಿ ತಮ್ಮ ವಿಶ್ವಾಸಿ
ಫೆಡಿನಾ ಸಂಸ್ಥೆ
ಅಪ್ಸಾ ಸಂಸ್ಥೆ
ಅಂಬೇಡ್ಕರ್ ಸೋಶಿಯಲ್ ವೇಲ್ಫೇರ್ ಅಸೋಸಿಯೇಷನ್, ರಾಜೀವ್ ಗಾಂಧಿನಗರ
ಅಖಿಲ ಕನರ್ಾಟಕ ವಯೋವೃದ್ಧರ ಒಕ್ಕೂಟ, ಲಿಂಗರಾಜಪುರಂ
ನಾಗವಾರ ನಾಗರೀಕರ ಕ್ಷೇಮಾಭಿವೃದ್ಧಿ ಕಲ್ಯಾಣ ಸಂಘ ಸಂಸ್ಥೆಗಳು
ವಿಳಾಸ:- ಸಿವಿಕ್ ಬೆಂಗಳೂರು ಸಂಸ್ಥೆ, ನಂ.6, ಕಸ್ತೂರಿ ಅಪಾರ್ಟಮೆಂಟ್, 2ನೇ ಮಹಡಿ, ನಂ.35/23, ಲ್ಯಾಂಗ್ ಪೋರ್ಡ ರಸ್ತೆ, ಶಾಂತಿನಗರ, ಬೆಂಗಳೂರು-25, ದೂ. ಸಂಖ್ಯೆ:22110584, ಪ್ಯಾಕ್ಸ್: 41144126, ಇ ಮೇಲ್: ಟಿಜಿಠ@ಛಿತಛಿಠಿಚಿಛಿಜ.ಟಿ <ಟಚಿಟಣಠ:ಟಿಜಿಠ@ಛಿತಛಿಠಿಚಿಛಿಜ.ಟಿ>, ಟಿಣಜಡಿಟಿಜಣ : ತಿತಿತಿ.ಛಿತಛಿಠಿಚಿಛಿಜ.ಟಿ <ಣಣಠಿ://ತಿತಿತಿ.ಛಿತಛಿಠಿಚಿಛಿಜ.ಟಿ