ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತಾದ ಅಧ್ಯಯನಗಳ ಮಂಡನೆ ಮತ್ತು ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮೂಡಿದ ಶಿಫಾರಸ್ಸುಗಳು

ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತಾದ ಅಧ್ಯಯನಗಳ ಮಂಡನೆ ಮತ್ತು ಸಾರ್ವಜನಿಕ ಸಮಾಲೋಚನಾ ಸಭೆಯ ವರದಿ
ದಿನಾಂಕ: 7ನೇ ಫೆಬ್ರವರಿ 2012
ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ
(ಂಖಿ-ಟಿಣಣಣಣಠಟಿ ಠಜಿ ಂರಡಿಛಿಣಟಣಣಡಿಚಿಟ ಖಿಜಛಿಟಿಠಟಠರಣ)
#15, ಕ್ವೀನ್ಸ್ ರಸ್ತೆ, ಸಂಜೆವಾಣಿ ಪತ್ರಿಕೆ ಮುಂಭಾಗ, ಶಿವಾಜಿನಗರ, ಬೆಂಗಳೂರು-46ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತಾದ ಅಧ್ಯಯನಗಳ ಮಂಡನೆ ಮತ್ತು ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಮೂಡಿದ ಶಿಫಾರಸ್ಸುಗಳು ಪಡಿತರ ಅಂಗಡಿಗಳ ಕಾರ್ಯನಿರ್ವಹಣೆ ಕುರಿತ ಶಿಫಾರಸ್ಸುಗಳು:
ಇಲಾಖೆಯ ನಿಯಮದಂತೆ ಪಡಿತರ ಅಂಗಡಿಗಳು ರಜಾ ದಿನಗಳ ಹೊರತುಪಡಿಸಿ ಮಿಕ್ಕೆಲ್ಲ್ಲ ದಿನಗಳು ಕಾರ್ಯ ನಿರ್ವಹಿಸುವಂತೆ ಇಲಾಖೆ ಗಮನವಹಿಸಿ, ಪಡಿತರ ಕಾಡರ್್ದಾರರಿಗೆ ತೊಂದರೆಯಾಗದಂತೆ ತಿಂಗಳಲ್ಲಿ ಯಾವಾಗ ಬೇಕಾದರೂ ಅವರ ಪಡಿತರವನ್ನು ಕೊಳ್ಳಲು ಅನುಕೂಲ ಮಾಡಬೇಕು.
ಸವರ್ೋಚ್ಛ ನ್ಯಾಯಾಲಯದ ಆದೇಶದ ಅನುಸಾರ ಅಂಗಡಿಯ ಪ್ರದರ್ಶನಾ ಫಲಕಗಳಲ್ಲಿ ಪ್ರದಶರ್ಿಸಬೇಕೆಂದು ಹೇಳಿರುವ ಅಂಶಗಳನ್ನೆಲ್ಲ ಕಡ್ಡಾಯವಾಗಿ ಪ್ರದಶರ್ಿಸದ ಅಂಗಡಿಗಳಿಗೆ ದಂಡಹಾಕಿ ಮಾಹಿತಿಗಳನ್ನು ಪ್ರದಶರ್ಿಸಲು ಒತ್ತಡ ಹಾಕಬೇಕು.
ಜಾಗೃತ ಸಮಿತಿ ಕುರಿತ ಶಿಫಾರಸ್ಸುಗಳು:
?    ಜಾಗೃತ ಸಮಿತಿಯನ್ನು ಪಡಿತರ ಚೀಟಿದಾರರೇ ಚುನಾಯಿಸಬೇಕು ಮತ್ತು ಸಮಿತಿಯಲ್ಲಿ ಕನಿಷ್ಠ 5-6 ಜನ ಪಡಿತರ ಚೀಟಿದಾರರಿಗೆ ಸದಸ್ಯತ್ವ ನೀಡಬೇಕು.
?    ಪ್ರತಿ ತಿಂಗಳೂ ಜಾಗೃತ ಸಮಿತಿ ಸಭೆ ನಡೆಸಬೇಕು ಮತ್ತು ಎರಡು ಬಾರಿ ಪಡಿತರ ಅಂಗಡಿಯ ತಪಾಸಣೆ ನಡೆಸಲು ಸಮಿತಿಗೆ ಅಧಿಕಾರ ನೀಡಬೇಕು. ಅಂಗಡಿಯಲ್ಲಿ ಆಹಾರ ವಿತರಣೆಯಲ್ಲಿ ಏನಾದರೂ ಲೋಪದೋಷಗಳು ಕಂಡುಬಂದಲ್ಲಿ ವಿಚಾರಣೆ ನಡೆಸಿ ಕನಿಷ್ಠ ಮಟ್ಟದ ಶಿಕ್ಷೆ ವಿಧಿಸುವ ಅಧಿಕಾರವನ್ನು ಜಾಗೃತ ಸಮಿತಿಗೆ ನೀಡಬೇಕು.
?    ಜಾಗೃತ ಸಮಿತಿ ಸದಸ್ಯರಿಗೆ ನಿಯಮಿತ ತರಬೇತಿಗಳ ಮೂಲಕ ದೂರುಗಳನ್ನು ನಿವಾರಿಸುವ ಮತ್ತು ಸಭೆಗಳ ನಡಾವಳಿಗಳನ್ನು ದಾಖಲಿಸುವ ಸಾಮಥ್ರ್ಯವನ್ನು ಹೆಚ್ಚಿಸಿ ಅವರ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಾಡಬೇಕು.
?    ಸಮಿತಿಯ ಬಗ್ಗೆ ಜನರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನೀಡಬೇಕು.
?    ಆಹಾರ ನಿರೀಕ್ಷಕರನ್ನು ಈ ಸಮಿತಿಯ ಮೇಲ್ವಿಚಾರಕರನ್ನಾಗಿ ನೇಮಕ ಮಾಡಬೇಕು ಮತ್ತು ಅವರು ಜಾಗೃತ ಸಮಿತಿ ಸಭೆಗಳಲ್ಲಿ, ಕುಂದುಕೊರತೆ ನಿವಾರಣಾ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು.

ಪಡಿತರ ಅಂಗಡಿಗಳು ಲಾಭದಾಯಕವಾಗಿ ನಡೆಯಲು:
ಅಂಗಡಿ ಮಟ್ಟದಲ್ಲಿ ನಷ್ಟ ಮತ್ತು ವಂಚನೆ ತಡೆಯಲು ಅಂಗಡಿ ಮಾಲೀಕರಿಗೆ ಸೂಕ್ತ ಲಾಭ ಬರುವ ಹಾಗೆ ವ್ಯವಸ್ಥೆ ಮಾಡಬೇಕು

ಅದಾಲತ್ ಮತ್ತು ಕುಂದುಕೊರತೆ ನಿವಾರಣಾ ಸಭೆಗಳು:

?    ಅಧಿಕಾರಿಗಳು ಅವರ ಕರ್ತವ್ಯ ಪಟ್ಟಿಯಲ್ಲಿ ನಮೂದಿಸಿರುವಂತೆ ಗ್ರಾಮ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟಗಳಲ್ಲಿ ಅದಾಲತ್ಗಳನ್ನು ನಿಗದಿತ ಸಮಯಗಳಲ್ಲಿ ನಡೆಸಿ, ಪಡಿತರದಲ್ಲಿ ಕಂಡುಬರುವ ಸಮಸ್ಯೆಗಳನ್ನು ನಿವಾರಿಸಬೇಕು.
?    ಎರಡು ತಿಂಗಳಿಗೊಮ್ಮೆ ಕುಂದುಕೊರತೆಗಳ ನಿವಾರಣಾ ಸಭೆ ಏರ್ಪಡಿಸಬೇಕು.

ಭ್ರಷ್ಟಾಚಾರ ತಡೆಗಟ್ಟಲು:
ಎಲ್ಲ ತಾತ್ಕಾಲಿಕ ಕಾಡರ್್ಗಳನ್ನು ರದ್ದುಪಡಿಸಿ ಎಲ್ಲರಿಗೂ ಕಾಯಂ ಕಾಡರ್್ಗಳನ್ನು ವಿತರಿಸಿ ಎಲ್ಲ ನಕಲಿ ಕಾಡರ್್ಗಳನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು.
ವಿತರಣೆಯಲ್ಲಿನ ಸೋರಿಕೆಯನ್ನು ತಡೆಗಟ್ಟಲು, ಪ್ರತೀ ಸಗಟು ದಾಸ್ತಾನು ಕೇಂದ್ರಗಳ ಬಳಿ ವೈಬ್ರಿಡ್ಜ್ಗಳ ನಿಮರ್ಾಣ ಮಾಡಬೇಕು, ಅಂಗಡಿಯ ಮಟ್ಟದಲ್ಲಿ ಸಹ ಗಣಕೀಕೃತ ಮಾಪಕಗಳನ್ನು ಬಳಸುವ ಮೂಲಕ ವಂಚನೆಯನ್ನು ತಡೆಗಟ್ಟಬೇಕು.
ಪಡಿತರ ಕಾಡರ್್ದಾರರಿಗೆ ಗಣಕೀಕೃತ ಸ್ಮಾಟರ್್ಕಾಡರ್್ ವಿತರಿಸಿ ಆಹಾರ ಇಲಾಖೆಯ ಮಾಹಿತಿ ಕೇಂದ್ರಕ್ಕೆ ಸಂಪರ್ಕ ಒದಗಿಸಬೇಕು.
ಪಡಿತರ ಆಹಾರಗಳನ್ನು ಸಾಗಣೆ ಮಾಡುವ ಲಾರಿಗಳಿಗೆ ಜಿಪಿಎಸ್ ಯಂತ್ರವನ್ನು ಅಳವಡಿಸಬೇಕು

ಅಂಗನವಾಡಿಗಳ ಸಬಲೀಕರಣಕ್ಕಾಗಿ:
?    ಅಪೌಷ್ಟಿಕತೆ ಸಮಸ್ಯೆಯು ಕನರ್ಾಟಕದಲ್ಲಿ ತೀವ್ರವಾಗಿರುವುದರಿಂದ ಆಶಾ ಮತ್ತು ಅಂಗನವಾಡಿ ಕಾರ್ಯಕತರ್ೆಯರು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಾದ ತರಬೇತಿಯನ್ನು ನೀಡಿ ಅಪೌಷ್ಟಿಕತೆ ನಿವಾರಣೆಯತ್ತ ಕೆಲಸ ಮಾಡಲು ಸಶಕ್ತರಾಗಿಸಬೇಕು.
?    ಅಂಗನವಾಡಿ ಕಾರ್ಯಕತರ್ೆಯರಿಗೆ ಮಕ್ಕಳ ಬೆಳವಣಿಗೆಯ ಪ್ರಗತಿಯ ನಿರಂತರ ಪರಿಶೀಲನೆಗೆ ಬೆಳವಣಿಗೆ ನಕ್ಷೆಯಲ್ಲಿ ಕಾಲಕಾಲಕ್ಕೆ ಮಕ್ಕಳ ಬೆಳವಣಿಗೆಯನ್ನು ಹೇಗೆ ನಮೂದಿಸಬೇಕು ಎಂಬುದರ ಬಗ್ಗೆ ತರಬೇತಿ ನೀಡಬೇಕು.
?    ಅಂಗನವಾಡಿಗಳಲ್ಲಿ ಗಭರ್ಿಣಿ ಸ್ತ್ರೀಯರ ಅರೋಗ್ಯ ಪರಿಶಿಲನೆ ಮತ್ತು ಅಗತ್ಯವಾದಲ್ಲಿ ಅರೋಗ್ಯ ಕೇಂದ್ರಗಳಿಗೆ ಹೆಚ್ಚಿನ ಸಲಹೆ ಚಿಕಿತ್ಸೆಗಳಿಗೆ ಕಳುಹಿಸಲು ಅಂಗನವಾಡಿ ಕಾರ್ಯಕತರ್ೆಯರಿಗೆ ತರಬೇತಿ ನೀಡಬೇಕು.

ಅಪೌಷ್ಟಿಕತೆ ನಿವಾರಣೆಗೆ ಸಲಹೆಗಳು:
?    ಸೊನ್ನೆಯಿಂದ ಆರು ವರ್ಷದ ಮಕ್ಕಳ ಮರುಸಮೀಕ್ಷೆ ಮಾಡಬೇಕು.
?    ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರಾರಂಭವಾಗಿರುವ ಬಾಲ ವಿಕಾಸ ಮತ್ತು ಬಾಲ ಸಂಜೀವಿನಿ ಮತ್ತು ಎನ್.ಆರ್.ಹೆಚ್.ಎಂ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಬೇಕು ಮತ್ತು ಇಲ್ಲಿ ಎಲ್ಲ ಅಪೌಷ್ಟಿಕ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಮತ್ತು ಔಷಧಗಳು ಸಿಗಬೇಕು.
?    ಅಪೌಷ್ಟಿಕತೆಯನ್ನು ನೀಗಿಸಲು ಪ್ರಾದೇಶಿಕ ಪದ್ಧತಿಗನುಸಾರವಾದ ಬೇಳೆ-ಕಾಳು ತರಕಾರಿಗಳನ್ನೊಳಗೊಂಡ ಬಿಸಿಯೂಟವನ್ನು ಅಂಗನವಾಡಿ ಮಕ್ಕಳಿಗೆ ಹೊಟ್ಟೆತುಂಬ ನೀಡಬೇಕು
?    ಈ ರೀತಿಯ ಪೌಷ್ಟಿಕ ಆಹಾರ ನೀಡಲು ಅಗತ್ಯವಾದ ಹಣವನ್ನು ಆಯವ್ಯಯದಲ್ಲಿ ನಿಗದಿ ಮಾಡಬೇಕು. ಈಗಿನ ದರದಲ್ಲಿ ಈ ರೀತಿಯ ಆಹಾರವನ್ನು ನೀಡಲು ಪ್ರತಿ ಮಗುವಿಗೆ ದಿನವೊಂದಕ್ಕೆ 15 ರೂಪಾಯಿಗಳನ್ನು ನಿಗದಿ ಮಾಡಬೇಕು.
?    ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಅವರ ಆರೈಕೆಗೆ ಸೂಕ್ತ ವ್ಯವಸ್ಥೆಯನ್ನು ತುತರ್ಾಗಿ ಮಾಡಬೇಕು.
?    ಅಪೌಷ್ಟಿಕತೆ ಸಮಸ್ಯೆಯು ತಾಯ ಗರ್ಭದಿಂದ ಪ್ರಾರಂಭವಾಗುವುದರಿಂದ ಗಭರ್ಿಣಿ ಸ್ತ್ರೀಯರಿಗೆ ಉತ್ತಮ ಆಹಾರ ದೊರೆಯುವಂತೆ ಮಾಡಲು ಸಕರ್ಾರದ ವಿವಿಧ ಇಲಾಖೆಗಳ ವಿವಿಧ ಯೋಜನೆಗಳು ಸಮರ್ಪಕವಾಗಿ ಜಾರಿಯಾಗುವಂತೆ ಮಾಡಬೇಕು.

ಪಡಿತರ ಚೀಟಿ ನೀಡಲು ಕ್ರಮಗಳು:
?    ಪ್ರತೀ ಬಾರಿ ಸಮೀಕ್ಷೆಯ ನಂತರವೇ ಬಿಪಿಎಲ್ ಕಾಡರ್್ ವಿತರಿಸುವ ವ್ಯವಸ್ಥೆಯಿಂದ ಅರ್ಹ ಬಡಕುಟುಂಬದ ಆಹಾರದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಆದ್ದರಿಂದ ಅರ್ಹ ಕುಟುಂಬವು ಬಿಪಿಎಲ್ ಕಾಡರ್್ಗಾಗಿ ಅಜರ್ಿ ಹಾಕಿದ ತಕ್ಷಣವೇ ಆ ಕುಟುಂಬದ ಮಾಹಿತಿಗಳ ಪರಿಶೀಲನೆ ಮಾಡಿ ಕಾಡರ್್ ವಿತರಿಸಬೇಕು.
?    ಹೆಚ್ಐವಿ ಸೋಂಕಿತರಿಗೆ ಎಎವೈ ಕಾಡರ್್ ನೀಡಬೇಕೆಂಬ ಆದೇಶದ ಪ್ರಕಾರ ಅವರಿಗೆ ಎಎವೈ ಕಾರ್ಡನ್ನು ಶೀಘ್ರವೇ ನೀಡಿ, ಈ ಮೂಲಕ ಅವರು ತಮ್ಮ ಆರೋಗ್ಯ ಸೇವೆಯಲ್ಲಿ ಸಹ ರಿಯಾಯಿತಿ ಪಡೆಯಲ ಅನುಕೂಲ ಮಾಡಬೇಕು.

ಆಹಾರಕ್ಕೆ ಬದಲಾಗಿ ಹಣ ನೀಡುವ ಯೋಜನೆ ಕುರಿತಂತೆ:
?    ಹೊಸ ಆಹಾರ ಹಕ್ಕು ಕಾಯ್ದೆಯಲ್ಲಿ ಸೂಚಿಸಿರುವಂತೆ ಆಹಾರದ ಬದಲಾಗಿ ಹಣವನ್ನು ನೀಡುವ ಯೋಜನೆಯನ್ನು ಕೈಬಿಡಬೇಕು.
ಹೊಸ ಆಹಾರದ ಹಕ್ಕು ಕಾಯ್ದೆ ಕುರಿತು ಶಿಫಾರಸ್ಸುಗಳು:

?    ಸವರ್ೋಚ್ಛ ನ್ಯಾಯಾಲಯ ಆಹಾರ ಮತ್ತು ಪಡಿತರ ಕುರಿತಾಗಿ ನೀಡಿರುವ ಹಲವಾರು ಆದೇಶಗಳು ಜನರ ಆಹಾರದ ಹಕ್ಕನ್ನು ನೀಡುವಲ್ಲಿ ಸಹಕಾರಿಯಾಗಿವೆ. ಆದರೆ ಹೊಸ ಆಹಾರ ಹಕ್ಕು ಕಾಯ್ದೆ ಜಾರಿಯಾದಲ್ಲಿ ಈ ಆದೇಶಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತವೆ, ಮತ್ತು ಹೊಸ ಆಹಾರ ಭದ್ರತೆ ಕಾಯ್ದೆ ಯಾವುದೆ ರೀತಿಯ ಆಹಾರದ ಭದ್ರತೆಯನ್ನು ನೀಡುವುದಿಲ್ಲವಾದ್ದರಿಂದ, ಈ ಕಾಯ್ದೆಯು ಅನಗತ್ಯ.
?    ಪಡಿತರದಲ್ಲಿ ಆಗುತ್ತಿರುವ ಸೋರಿಕೆಯನ್ನ ತಡೆಗಟ್ಟಲು ಮತ್ತು ಹೆಚ್ಚಿನ ಬಡವರಿಗೆ ಪಡಿತರದ ಯೋಜನೆ ತಲುಪಿಸಲು ಪಡಿತರದ ಸಾರ್ವತರ್ೀಕರಣವಾಗಬೇಕು.
?    ಕುಟುಂಬದ ಪ್ರತಿ ಸದಸ್ಯರಿಗೆ ಏಳು ಕೆಜಿ ಆಹಾರ ಧಾನ್ಯವನ್ನು ನಿಗದಿ ಪಡಿಸಿ ಪ್ರತಿ ಕುಟುಂಬಕ್ಕೆ ವಿತರಿಸುವ ಧಾನ್ಯಕ್ಕೆ ಗರಿಷ್ಠ ಮಿತಿ ನಿಗದಿಪಡಿಸಿದಲ್ಲಿ, ಯಾವುದೇ ಕುಟುಂಬದಲ್ಲಿ ಐದು ಜನಕ್ಕಿಂತ ಹೆಚ್ಚು ಸದಸ್ಯರಿದ್ದ ಪಕ್ಷದಲ್ಲಿ ಪ್ರತಿ ಸದಸ್ಯರಿಗೆ ಸಿಗುವ ಧಾನ್ಯದ ಮೊತ್ತದಲ್ಲಿ ಕಡಿತವಾಗುತ್ತದೆ. ಆದ್ದರಿಂದ ಪ್ರತಿ ಕುಟುಂಬಕ್ಕೆ ವಿತರಿಸುವ ಧಾನ್ಯಕ್ಕೆ ನಿಗದಿ ಪಡಿಸಿರುವ ಗರಿಷ್ಠ ಮಿತಿಯನ್ನು ತೆಗೆದುಹಾಕಬೇಕು.
?    ಕೇವಲ ಅಕ್ಕಿ ಗೋಧಿ ಮಾತ್ರವಲ್ಲದೆ ಪಡಿತರದಡಿಯಲ್ಲಿ ಪೌಷ್ಟಿಕಾಂಶ ಪೂರಕವಾದ, ಬೇಳೆಕಾಳುಗಳು ಮತ್ತು ಎಣ್ಣೆಯನ್ನು ಸಹ ವಿತರಿಸಬೇಕು.

ಬಿಪಿಎಲ್ ಸಮೀಕ್ಷೆ ಕುರಿತಂತೆ:
?    ಹೊಸದಾಗಿ ನಡೆಯುತ್ತಿರುವ ಬಿಪಿಎಲ್ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಅದನ್ನು ಕೂಡಲೇ ನಿಲ್ಲಿಸಿ ಎಲ್ಲರಿಗೂ ಪಡಿತರ ಚೀಟಿ ವಿತರಿಸಬೇಕು.
ಸಾರ್ವಜನಿಕ ವಿತರಣಾ ವ್ಯವಸ್ಥೆ ಕುರಿತಾದ ಅಧ್ಯಯನಗಳ ಮಂಡನೆ ಮತ್ತು ಸಾರ್ವಜನಿಕ ಸಮಾಲೋಚನಾ ಸಭೆಯ ವರದಿ
ಕಾರ್ಯಕ್ರಮದ ಅಧ್ಯಕ್ಷತೆ:
ಶ್ರೀ ಕ್ಲಿಫé್ಟನ್ ಡಿ’ರೊಸಾರಿಯೋ
ಸವರ್ೋಚ್ಛ ನ್ಯಾಯಾಲಯದ ಆಹಾರದ ಹಕ್ಕು ಆಯುಕ್ತರ ರಾಜ್ಯ ಸಲಹೆಗಾರರು

ಮುಖ್ಯ ಅತಿಥಿಗಳು
ಶ್ರೀ ವೈ. ಮರಿಸ್ವಾಮಿ
ರಾಜ್ಯ ಸಂಘಟಕರು, ಸಾಮಾಜಿಕ ಪರಿವರ್ತನ ಜನಾಂದೋಲನ
ಶ್ರೀಮತಿ ಕೆ. ಸುಧಾ
ಸಂಚಾಲಕರು, ಆಹಾರದ ಹಕ್ಕಿಗಾಗಿ ಆಂದೋಲನ-ಕನರ್ಾಟಕ.
ಶ್ರೀ ಜಿ. ಎನ್. ಸಿಂಹ
ಸಂಚಾಲಕರು, ಆಹಾರದ ಹಕ್ಕಿಗಾಗಿ ಆಂದೋಲನ- ಉತ್ತರ ಕನರ್ಾಟಕ ಕನರ್ಾಟಕ

ಛಾಯಾಚಿತ್ರಗಳು

ಪತ್ರಿಕಾ ವರದಿಗಳು

ವರದಿ ತಯಾರಿಸಿದವರು
ರಾಜರಾಜೇಶ್ವರಿ
ಸಿವಿಕ್ ಬೆಂಗಳೂರು